ರಾಜ್ಯದ ಎಲ್ಲಾ ಸರಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್ಗಳಲ್ಲಿ 2018-19ನೇ ಸಾಲಿನ ಪ್ರಥಮ ಡಿಪ್ಲೋಮಾ ಕೋರ್ಸುಗಳಿಗೆ ಪ್ರವೇಶಾತಿಯನ್ನು ಆನ್ಲೈನ್ ಇಂಟರಾಕ್ಟೀವ್ ಕೌನ್ಸಲಿಂಗ್” ಮೂಲಕ ನಡೆಸುವ ಕುರಿತಂತೆ ಡಿಪ್ಲೋಮಾ ಇಂಜಿನಿಯರಿಂಗ್ ಮತ್ತು ನಾನ್-ಇಂಜಿನಿಯರಿಂಗ್ ಡಿಪ್ಲೋಮಾ ಪ್ರವೇಶಕ್ಕಾಗಿ ಆಸಕ್ತ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ :

  1. ಇಂಜಿನಿಯರಿಂಗ್ ಕೋರ್ಸುಗಳಿಗೆ :
    1. ಕರ್ನಾಟಕ ಎಸ್‍ಎಸ್‍ಎಲ್‍ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ 35% ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.
  2. ನಾನ್-ಇಂಜಿನಿಯರಿಂಗ್ ಕೋರ್ಸುಗಳಿಗೆ :
    1. ಕಮರ್ಷಿಯಲ್ ಪ್ರಾಕ್ಟೀಸ್ (ಕನ್ನಡ ಮತ್ತು ಆಂಗ್ಲ), ಅಪೆರಲ್ ಡಿಸೈನ್ ಮತ್ತು ಫ್ಯಾಬ್ರಿಕೇಷನ್ ಟೆಕ್ನಾಲಜಿ(ADFT) ಹಾಗೂ ಮಾಡ್ರನ್ ಆಫೀಸ್ ಮ್ಯಾನೇಜ್‍ಮೆಂಟ್ ಕೋರ್ಸುಗಳಿಗೆ :
      • ಕರ್ನಾಟಕ ಎಸ್‍ಎಸ್‍ಎಲ್‍ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ 35% ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.
  3. ಸಿನಿಮಾಟೋಗ್ರಫಿ ಮತ್ತು ಸೌಂಡ್ ರೆಕಾರ್ಡಿಂಗ್ & ಇಂಜಿನಿಯರಿಂಗ್ ಕೋರ್ಸುಗಳಿಗೆ :
    1. ಕರ್ನಾಟಕ ಎಸ್‍ಎಸ್‍ಎಲ್‍ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ 35% ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.
  4. ಲೈಬ್ರರಿ ಸೈನ್ಸ್ ಕೋರ್ಸುಗಳಿಗೆ :
    1. ಕರ್ನಾಟಕ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ 35% ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.

 

ಪ್ರವೇಶಕ್ಕೆ ಇರಬೇಕಾದ ಇತರೆ ಅರ್ಹತೆಗಳು :

ಅಭ್ಯರ್ಥಿಯು ಭಾರತದ ಪ್ರಜೆಯಾಗಿರಬೇಕು ಹಾಗೂ ಅರ್ಜಿ ಸಲ್ಲಿಸುವ ಪೂರ್ವದಲ್ಲಿ ಕರ್ನಾಟಕದಲ್ಲಿ 1ನೇ ತರಗತಿಯಿಂದ 10ನೇ ತರಗತಿಯನ್ನೊಳಗೊಂಡು ಕನಿಷ್ಠ ಐದು ವರ್ಷಗಳವರೆಗೆ ವ್ಯಾಸಂಗ ಮಾಡಿರಬೇಕು. ಹೆಚ್ಚಿನ ವಿವರಗಳಿಗಾಗಿ ಅಧಿಕೃತ ಪ್ರಕಟಣೆಯನ್ನು ನೋಡಬಹುದು.

 

ಅರ್ಜಿ ಶುಲ್ಕ :

  • ಎಸ್‍ಸಿ, ಎಸ್‍ಟಿ ಮತ್ತು ಪ್ರವರ್ಗ-1ರ ವಿದ್ಯಾರ್ಥಿಗಳಿಗೆ : ರೂ.50
  • ಸಾಮಾನ್ಯ ಹಾಗೂ ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ : ರೂ.100

 

ಅರ್ಜಿ ಶುಲ್ಕ ಪಾವತಿಸುವ ವಿಧಾನ :

ಬ್ಯಾಂಕ್ ಖಾತೆಯ ಹೆಸರು ಖಾತೆ ಸಂಖ್ಯೆ IFSC ಕೋಡ್
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಮಲ್ಲೇಶ್ವರಂ ಶಾಖೆ, ಬೆಂಗಳೂರು ED-KEA-DCET-2018 Application Fee Collection Account   36843662415  SBIN0007080

ಸೂಚನೆ :

ಅರ್ಜಿ ಸಲ್ಲಿಸುವ ಮೊದಲು ಕರ್ನಾಟಕ ರಾಜ್ಯದ ಯಾವುದೇ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಯಲ್ಲಿ ಅರ್ಜಿ ಶುಲ್ಕವನ್ನು ಮೇಲೆ ತಿಳಿಸಿರುವಂತಹ ಖಾತೆಗೆ ಪಾವತಿಸಿ ಬ್ಯಾಂಕ್ ಚಲನ್ ಪಡೆದು ಸಮೀಪವಿರುವ ,ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿರುವ 122 ಸರ್ಕಾರಿ/ಅನುದಾನಿತ ಪಾಲಿಟೆಕ್ನಿಕ್ ದಾಖಲಾತಿ ಪರಿಶೀಲನಾ ಕೇಂದ್ರ” ಗಳಲ್ಲಿ ಎಲ್ಲಾ ಮೂಲ ದಾಖಲೆಗಳ ಪರಿಶೀಲನೆ ಮಾಡಿಸಿ, ಸ್ವೀಕೃತಿಯನ್ನು ಪಡೆದು, ಹಾಗೂ ಎಲ್ಲಾ ಮೂಲ ದಾಖಲೆಗಳ ಪೋಟೊಪ್ರತಿಗಳಿಗೆ ಸ್ವಯಂ ದೃಢೀಕರಿಸಿ, ನಂತರ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸತಕ್ಕದ್ದು.

 

ಮೂಲ ದಾಖಲೆಗಳು :

  1. ವಿದ್ಯಾರ್ಥಿಯ ಇತ್ತೀಚಿನ ಭಾವಚಿತ್ರ
  2. ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ
  3. ಪಿಯುಸಿ ಅಂಕಪಟ್ಟಿ ತೇರ್ಗಡೆಗೊಂಡಿದ್ದಲ್ಲಿ
  4. ಮೀಸಲಾತಿ ಕೋರುವ ಪ್ರಮಾಣಪತ್ರಗಳು
  5. ಜಾತಿ ಮತ್ತು ಆದಾಯ ಪ್ರಮಾಣಪತ್ರ
  6. ವರ್ಗಾವಣೆ ಪ್ರಮಾಣಪತ್ರ
  7. ವ್ಯಾಸಂಗ ಪ್ರಮಾಣಪತ್ರ
  8. ಅರ್ಜಿ ನಮೂನೆ

 

ಪ್ರಮುಖ ದಿನಾಂಕಗಳು :

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 07.05.2018

ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ : 28.05.2018

 

ಅಧಿಕೃತ ಪ್ರಕಟಣೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ನಮೂನೆ ಡೌನ್‍ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ