ಡಿ.ಎಲ್.ಇಡಿ/ಡಿ.ಪಿ.ಇಡಿ ಕೋರ್ಸುಗಳ 2017-18ನೇ ಸಾಲಿನಲ್ಲಿ ವ್ಯಾಸಂಗಕ್ಕಾಗಿ ರಾಜ್ಯದ ಸರಕಾರಿ ಮತ್ತು ಮಾನ್ಯತೆ ಪಡೆದ ಅನುದಾನಿತ ಮತ್ತು ಅನುದಾನ ರಹಿತ ಶಿಕ್ಷಕ ತರಬೇತಿ ಸಂಸ್ಥೆಗಳಲ್ಲಿನ ಸರಕಾರಿ ಕೋಟಾದ ಸೀಟುಗಳ ದಾಖಲಾತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಡಿ.ಎಲ್.ಇಡಿ ಕೋರ್ಸು : ದ್ವಿತೀಯ ಪಿ.ಯು.ಸಿ./12ನೇ ತರಗತಿಯ ಪರೀಕ್ಷೆಯಲ್ಲಿ ಎಸ್.ಸಿ/ ಎಸ್.ಟಿ./ಪ್ರವರ್ಗ-1 ಅಂಗವಿಕಲ ಅಭ್ಯರ್ಥಿಗಳು ಕನಿಷ್ಠ ಶೇಕಡ 45ಮತ್ತು ಇತರ ಅಭ್ಯರ್ಥಿಗಳು ಕನಿಷ್ಠ ಶೇಕಡ 50 ಅಂಕಗಳನ್ನು ಪಡೆದಿರಬೇಕು.
ಡಿ.ಪಿ.ಇಡಿ ಕೋರ್ಸು : ಡಿ.ಪಿ.ಇಡಿ ಕೋರ್ಸುಗೆ ಸೇರುವ ಎಲ್ಲಾ ಅಭ್ಯರ್ಥಿಗಳು ದ್ವಿತೀಯ ಪಿ.ಯು.ಸಿ/12ನೇ ತರಗತಿಯ ಪರೀಕ್ಷೆಯಲ್ಲಿ ಕನಿಷ್ಠ ಶೇಕಡ 45 ಅಂಕ ಹಾಗೂ ಶಿಕ್ಷಣ ಇಲಾಖೆ, ವಿಶ್ವವಿದ್ಯಾಲಯ ಅಥಾವ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಆಯೋಜಿಸಿರುವ ರಾಜ್ಯ ಅಥಾವ ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿ ಪ್ರಮಾಣ ಪತ್ರ ಹೊಂದಿರುವ ಅಭ್ಯರ್ಥಿಗಳು ಕನಿಷ್ಠ ಶೇ.40 ಅಂಕ ಪಡೆದಿರಬೇಕು.
ಆನ್ ಲೈನ್ ಮೂಲಕ ಅರ್ಜಿಗಳನ್ನು ಜೂನ್ 18ರ ವರೆಗೆ ಸಲ್ಲಿಸಬಹುದಾಗಿದ್ದು, ಅರ್ಜಿಯನ್ನು ಆನ್ ಲೈನ್ ಮೂಲಕ ಸಲ್ಲಿಸುವ ವಿಧಾನ, ಅರ್ಹತೆ ಮತ್ತು ಮೀಸಲಾತಿ ವಿವರಗಳು ಹಾಗೂ ಇತರ ಸೂಚನೆಗಳನ್ನು ವೆಬ್ ಸೈಟ್ www.schooleducation.kar.nic ನಲ್ಲಿ ಪ್ರಕಟಿಸಲಾಗಿದೆ.
ವೆಬ್ ಸೈಟ್ ನಲ್ಲಿನ ಮಾಹಿತಿ ಓದಿಕೊಂಡು ಅರ್ಜಿಗಳನ್ನು ಕ್ರಮವಾಗಿ ಭರ್ತಿ ಮಾಡಬೇಕು. ಹೆಚ್ಚಿನಮಾಹಿತಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಜೈಲ್ ರಸ್ತೆ, ಕೊಡಿಯಾಲ್ ಬೈಲು, ಮಂಗಳೂರು ಇವರ ಕಚೇರಿ ಸಂಪರ್ಕಿಸಬಹುದು.
ಅಭ್ಯರ್ಥಿಗಳಿಗೆ ಸೂಚನೆ :ದ.ಕ ಜಿಲ್ಲೆಯಲ್ಲಿನ ಬಲ್ಮಠದ ಸರಕಾರಿ ಮಹಿಳಾ ಶಿಕ್ಷಕಿಯರ ತರಬೇತಿ ಸಂಸ್ಥೆಯನ್ನು ಕೊಡಿಯಾಲ್ ಬೈಲ್ ನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ವಿಲೀನಗೊಳಿಸಲಾಗಿದ್ದು, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವೇಳೆ ಅಭ್ಯರ್ಥಿಗಳು ಸರಕಾರಿ ಮಹಿಳಾ ಶಿಕ್ಷಕಿಯರ ತರಬೇತಿ ಸಂಸ್ಥೆ, ಬಲ್ಮಠ, ಮಂಗಳೂರು ಸಂಸ್ಥೆಯ ಬದಲಾಗಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್), ಕೊಡಿಯಾಲ್ ಬೈಲ್, ಮಂಗಳೂರು, ಸಂಸ್ಥೆ ಅಯ್ಕೆ ಮಾಡಿಕೊಳ್ಳಬೇಕು. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್), ಕೊಡಿಯಾಳ್ ಬೈಲು, ಮಂಗಳೂರು, ದ.ಕ ಸಂಸ್ಥೆ ಜಿಲ್ಲೆಯಲ್ಲಿನ ಏಕಮಾತ್ರ ಸರಕಾರಿ ಡಿ.ಎಲ್.ಇಡಿ ಸಂಸ್ಥೆಯಾಗಿದೆ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮಂಗಳೂರು ಇದರ ಪ್ರಾಚಾರ್ಯರು ಹಾಗೂ ಪದನಿಮಿತ್ತ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Recent Comments